Udiyakki Hakatar Urbittu Kalisataar | Shabbir Dange Kannada Janpad Song Lyirics
Udiyakki Hakatar Urbittu Kalisataar | Shabbir Dange Kannada Janpad Song Lyirics
ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತಾರ ಈ ಸುಂದರವಾದ ಜಾನಪದ ಗೀತೆ ಬಿಡುಗಡೆಯಾಗಿ 26 ವರಷ ಗಳಾದರೂ ಇಂದಿಗೂ ನಮ್ಮ ಕನ್ನಡಿಗರ ಮನದಲ್ಲಿ ಉಳದಿದೆ . ಈ ಜಾನಪದ ಗೀತೆ ಪದಮಿನಿ ಮ್ಯೂಸಿಕ ಕಂಪನಿ [ ಸಾಂಗಲಿ ] ಇವರ ನಿರ್ಮಾಣದಲ್ಲಿ ಬಿಡುಗಡೆ ಯಾಗಿದ್ದು ಆ ಆಡಿಯೊ ಆಲ್ಬಮ್ ಹೆಸರು ಯಾದಿ ಮೆ ಶಾದಿ ಈ ಹಾಡು ನಾನು ಭಾಷಾ ಖಾನ್ ಸಮಯ ಸಿಕ್ಕಾಗ ಕೇಳತಾನೆ ಇರತೀನಿ ಯಾಕಂದರ ಈ ಹಾಡಿನ ಸಾಹಿತ್ಯದಲ್ಲಿ ಏನೊ ಒಂದು ತರಹಾ ರೋಮಾಂಚ ಇದೆ .
ಈ ಹಾಡಿಗೆ ಸಾಹಿತ್ಯ ಬರೇದವರು ನಮ್ಮ ಉತ್ತರ ಕರ್ನಾಟಕದ ಜಾನಪದ ಜಾಣ ಶಬ್ಬೀರ ಡಾಂಗೆ [ ಮೂಡಲಗಿ ] ಈ ಹಾಡು ಈ ದಾಟಿ ಅಂದರೆ ಮ್ಯೂಸಿಕ ಕಂಪೋಸಿಂಗ್ 1995 ರಲ್ಲಿ [ Tum To Tehare Pradeshi ] ಎಂಬ ಹಿಂದಿ ಆಲ್ಬಮನ್ನು ಪ್ರೇರಿತ ವಾಗಿ ಬರೆದಂಥ ಜಾನಪದ ಗೀತೆ
ಉಡಿಯಕ್ಕಿ ಹಾಕತಾರ ಈ ಹಾಡು ಒಂದು ಲವ್ ಫೀಲಿಂಗ ಜಾನಪದ ಗೀತೆ ಜಾನಪದ ಲೋಕದಲ್ಲಿ ಲವ್ ಹಾಡನ್ನು ಮೊಟ್ಟ ಮೊದಲ ಬಾರಿಗೆ ತಂದವರೇ ಶಬ್ಬೀರ ಡಾಂಗೆಯವರು . ಇವರು ಬರೆದು ಹಾಡಿರುವಂಥ ಒಂದೊಂದು ಹಾಡಲ್ಲಿ ಒಂದೊಂದು ಕಥೆ ಇದೆ . ಇಂಥ ಸಾಹಿತ್ಯಗಾರ ಮತ್ತು ಗಾಯಕನಿಗೆ ನನ್ನ ಕೋಟಿ ಕೋಟಿ ನಮನ
ಹಾಡು ; ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತಾರ
ಸಾಹಿತ್ಯ ; ಶಬ್ಬೀರ ಡಾಂಗೆ [ಮೂಡಲಗಿ]
ಗಾಯಕರು ; ಶಬ್ಬೀರ ಡಾಂಗೆ ,ಬಿ. ಆರ್ .ಛಾಯಾ . ಸುಜಾತಾ ದತ್ತ
ಸಂಗೀತ ; ಮಾರುತಿ ಮಿರಜಕರ
ಧ್ವನಿ ಮುದ್ರಣ ; ಪಾರೇಖ್ ರೆಕಾರ್ಡಿಂಗ್ ಸ್ಟುಡಿಯೊ ಬೆಂಗಳೂರು
ಆಲ್ಬಮ್ ಹೆಸರು ;ಯಾದಿ ಮೇ ಶಾದಿ
ಲೇಬಲ್ ; ಪದ್ಮಿನಿ ಮ್ಯೂಸಿಕ ಕಂಪನಿ [ಸಾಂಗಲಿ ]
ಉಡಿಯಕ್ಕಿ ಹಾಕತಾರ ಹಾಡು
ಶಬ್ಬೀರ ಡಾಂಗೆ :
ಉಡಿಯಕ್ಕಿ ಹಾಕತಾರ ಉಡಿಯಕ್ಕಿ ಹಾಕತಾರ
ಊರ ಬಿಟ್ಟು ಕಳಿಸತಾರ ।।೩।। ಕೋರಸ ಜ್ಯೋತೆ
ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತಾರ ।। ೨।। { ಕೋರಸ ಜ್ಯೋತೆ }
ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತಾರ
ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ . ಬಿಕ್ಕಿ ಬಿಕ್ಕಿ ಅಳಬ್ಯಾಡ
ನೀ ಮರಿಬ್ಯಾಡ ನನ್ನ ಹೆಸರ
ಸುಜಾತಾ
ಎ ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ।।೨ ।। { ಕೋರಸ ಜ್ಯೋತೆ }
ಬಿ .ಆರ್ .ಛಾಯಾ
ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ।।೨ ।। { ಕೋರಸ ಜ್ಯೋತೆ }
ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ
ಮದುವಿಯಾದ …….
ಸುಜಾತಾ
ಮದುವಿಯಾದ ಮದುವಿಯಾದ ಗಂಡನ ಹೊರತ
ನೆನಪಿಲ್ಲೊ ಯಾರ ಹೆಸರ
ಕೊರಸ
ಮದುವಿಯಾದ ಮದುವಿಯಾದ ಗಂಡನ ಹೊರತ
ನೆನಪಿಲ್ಲೊ ಯಾರ ಹೆಸರ
ಬಿ .ಆರ್ .ಛಾಯಾ
ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ
ಚರಣ ೧ ಶಬ್ಬೀರ ಡಾಂಗೆ :
ಮನಿ ಮುಂದ ಹಾಕಿ ಹಂದರ ನಡದೈತಿ ಭಾರಿ ಸಡಗರ
ಮನಿ ಮುಂದ ಹಾಕಿ ಹಂದರ ನಡದೈತಿ ಭಾರಿ ಸಡಗರ { ಕೋರಸ }
ಕನ್ನಡ ಶಾಯರಿ
ಏ ನೀನು ಹೇಳಿದ್ದರೆ ಹೂವುಗಳೇನು ಗೆಳತಿ ।। ನೀನು ಹೇಳಿದ್ದರೆ ಹೂವುಗಳೇನು ಗೆಳತಿ
ಚುಕ್ಕಿಗಳ ಹಂದರವನ್ನೆ ಹಾಕುತ್ತಿದ್ದೆ ಗೆಳತಿ
ನಿನ್ನ ಮದುವೆಯ ಸಡಗರದಿ ನನ್ನೆ ಮರತಲ್ಲೇ ।। ನಿನ್ನ ಮದುವೆಯ ಸಡಗರದಿ ನನ್ನೆ ಮರತಲ್ಲೇ
ನೀನು ಕೇಳಿದ್ದರೆ ನನ್ನ ಪ್ರಾಣವನ್ನೆ ಕೊಡುತ್ತಿದ್ದೆ ಗೆಳತಿ
ಹಾಡು ಶಬ್ಬೀರ ಡಾಂಗೆ
[ಶಬ್ಬೀರ ಡಾಂಗೆ ]ನನ್ನ ಮನಸು ನಿ ಮುರದಿ ಮುರಾಬಿಟ್ಟಿ ಮಾಡಿ ನಡದಿ
[ಕೋರಸ] ನನ್ನ ಮನಸು ನಿ ಮುರದಿ ಮುರಾಬಿಟ್ಟಿ ಮಾಡಿ ನಡದಿ [ಕೋರಸ]
[ಶಬ್ಬೀರ ಡಾಂಗೆ ] ನನ್ನ ಮನಸು ನಿ ಮುರದಿ ಮುರಾಬಿಟ್ಟಿ ಮಾಡಿ ನಡದಿ
ನಾಳೆ ನಾನು ,ನಾಳೆ ನಾನು ,ನಾಳೆ ನಾನು , ಸತ್ತ ಮ್ಯಾಗ
ಯಾರ ಹೆಸರ ಮ್ಯಾಲ ಅಳತಿ
[ಕೋರಸ] ನಾಳೆ ನಾನು , ಸತ್ತ ಮ್ಯಾಗ ಯಾರ ಹೆಸರ ಮ್ಯಾಲ ಅಳತಿ [ಕೋರಸ]
[ ಶಬ್ಬೀರ ಡಾಂಗೆ ] ಹಸಿರು ಬಳೆ ತೊಡಿಸತಾರ ಉಡಿಯ ತುಂಬಿ ಕಳಿಸತಾರ
[ಕೋರಸ ] ಹಸಿರು ಬಳೆ ತೊಡಿಸತಾರ ಉಡಿಯ ತುಂಬಿ ಕಳಿಸತಾರ
ಚರಣ ೨ ಬಿ .ಆರ್ .ಛಾಯಾ
[ಬಿ .ಆರ್ .ಛಾಯಾ] ಮನಸಾರೆ ಪ್ರೀತಿ ಮಾಡಲಿಲ್ಲ ನಿನ್ನ ಪ್ರೀತಿ ಉಳಿಯಲಿಲ್ಲ
[ಕೋರಸ] ಮನಸಾರೆ ಪ್ರೀತಿ ಮಾಡಲಿಲ್ಲ ನಿನ್ನ ಪ್ರೀತಿ ಉಳಿಯಲಿಲ್ಲ[ಕೋರಸ]
ಕನ್ನಡ ಶಾಯರಿ [ ಸುಜಾತಾ ದತ್ತ ]
ಪ್ರೇಮದ ಆಟದೊಳಗೆ ಹಾಳಾಯಿತು ಈ ಹುಡಗಿ ।।ಪ್ರೇಮದ ಆಟದೊಳಗೆ ಹಾಳಾಯಿತು ಈ ಹುಡಗಿ
ಹರಿತ ಚೂರಿಯ ಕೈಗೆ ಸಿಕ್ಕಿ ನೂರು ಹೋಳಾಯಿತು ಈ ಹುಡಗಿ ।
ನಂಬಿದಳು ಅಂಬಿಗನೆ ದಾಟಲು ತೀರವನು ।।ನಂಬಿದಳು ಅಂಬಿಗನೆ ದಾಟಲು ತೀರವನು
ನಡು ನೀರಿನಲಿ ಮುಳುಗಿಸಿದೆ । ಪ್ರೀತಿಯ ದೋಣಿಯನು
ನಡು ನೀರಿನಲಿ ಮುಳುಗಿಸಿದೆ । ಪ್ರೀತಿಯ ದೋಣಿಯನು
ಹಾಡು ;ಬಿ .ಆರ್ .ಛಾಯಾ
[ಬಿ .ಆರ್ .ಛಾಯಾ] ಮನಸಾರೆ ಪ್ರೀತಿ ಮಾಡಲಿಲ್ಲ ನಿನ್ನ ಪ್ರೀತಿ ಉಳಿಯಲಿಲ್ಲ
[ಕೋರಸ] ಮನಸಾರೆ ಪ್ರೀತಿ ಮಾಡಲಿಲ್ಲ ನಿನ್ನ ಪ್ರೀತಿ ಉಳಿಯಲಿಲ್ಲ[ಕೋರಸ]
[ಬಿ .ಆರ್ .ಛಾಯಾ] ಆ ಪ್ರೀತಿ ಉಳಿಯಲಿಲ್ಲ । ನಿನಗ್ಯಾಕ ತಿಳಿಯಲಿಲ್ಲ ।
ಸುಳ್ಳು ಸೊಗ , ಸುಳ್ಳು ಸೊಗ , ಸುಳ್ಳು ಸೊಗ ನೀ ಹಾಕಿದಿ
ಮಾಡುದೆಲ್ಲ ನೀ ಮಾಡಿದಿ
[ಕೋರಸ] ಸುಳ್ಳು ಸೊಗ ನೀ ಹಾಕಿದಿ ಮಾಡುದೆಲ್ಲ ನೀ ಮಾಡಿದಿ [ಕೋರಸ]
ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ।।೨ ।। { ಕೋರಸ ಜ್ಯೋತೆ }
ಚರಣ 3 ಬಿ .ಆರ್ .ಛಾಯಾ
[ಬಿ .ಆರ್ .ಛಾಯಾ] ಹುಡುಗಾಟ ಮಾಡಬ್ಯಾಡ ।ಸುಳ್ಳ ನನ್ನ ಕಾಡಬ್ಯಾಡ
[ಕೋರಸ] ಹುಡುಗಾಟ ಮಾಡಬ್ಯಾಡ ।ಹುಡುಗಿಯನ್ನು ಕಾಡಬ್ಯಾಡ [ಕೋರಸ]
ಕನ್ನಡ ಶಾಯರಿ { ಬಿ .ಆರ್ .ಛಾಯಾ}
ಆಸೆ ಕೊಟ್ಟು ನೋಡದಿರು ಗೆಳೆಯಾ ಈ ದಿಕ್ಕಿಗೆ ।ಆಸೆ ಕೊಟ್ಟು ನೋಡದಿರು ಗೆಳೆಯಾ ಈ ದಿಕ್ಕಿಗೆ ।
ಈ ಹಕ್ಕಿ ಬರಲಾರದು ನಿನ್ನ ತೆಕ್ಕೆಗೆ ।
ಹೋಂ ನಾನೊಂದು ದಿಕ್ಕಿಗೆ ನೀನೊಂದು ದಿಕ್ಕಿಗೆ ।ಹೋಂ ನಾನೊಂದು ದಿಕ್ಕಿಗೆ ನೀನೊಂದು ದಿಕ್ಕಿಗೆ ।
ನಾ ಹ್ಯಾಂಗ ಬರಲಿ ಹೇಳೊ ಗೆಳೆಯಾ ।ನಾ ಹ್ಯಾಂಗ ಬರಲಿ ಹೇಳೊ ಗೆಳೆಯಾ ।ಆ ನಿನ್ನ ತೆಕ್ಕೆಗೆ ।
ಹಾಡು ;ಬಿ .ಆರ್ .ಛಾಯಾ
ಪ್ರೀತಿ ಮಾಡಿ ಮರಿಬಾರದು ಮದುವಿ ಇಲ್ದ ಉಳಿಬಾರದು
[ಕೋರಸ] ಪ್ರೀತಿ ಮಾಡಿ ಮರಿಬಾರದು ಮದುವಿ ಇಲ್ದ ಉಳಿಬಾರದು [ಕೋರಸ]
[ಬಿ .ಆರ್ .ಛಾಯಾ] ಪ್ರೀತಿ ಮಾಡಿ ಮರಿಯಬಾರದು ಮದುವಿ ಇಲ್ದ ಉಳಿಯಬಾರದು
ಸತ್ತ ಮಾತು ,ಸತ್ತ ಮಾತು ,ಸತ್ತ ಮಾತಿಗೆಂದು ಗೆಳೆಯಾ ।ಅತ್ತು ಕರೆದು ನೆನೆಯಬಾರದು
[ಕೋರಸ] ಸತ್ತ ಮಾತಿಗೆಂದು ಗೆಳೆಯಾ ಅತ್ತು ಕರೆದು ನೆನೆಯಬಾರದು [ಕೋರಸ]
ಬಿ .ಆರ್ .ಛಾಯಾ
ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ
[ಕೋರಸ] ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ [ಕೋರಸ]
Udiyakki Hakatar Urbittu Kalisataar | Shabbir Dange Kannada Janpad Song Lyirics
ಚರಣ 4 ಶಬ್ಬೀರ ಡಾಂಗೆ :
{ಶಬ್ಬೀರ ಡಾಂಗೆ} ಚಿಂತಿನಿಂದ ಕಾಡಿತಲ್ಲ ಮನಿ ಮಾರ ಮರಿಸಿತೆಲ್ಲ
[ಕೋರಸ] ಚಿಂತಿನಿಂದ ಕಾಡಿತಲ್ಲ ಮನಿ ಮಾರ ಮರಿಸಿತೆಲ್ಲ[ಕೋರಸ]
ಕನ್ನಡ ಶಾಯರಿ ಶಬ್ಬೀರ ಡಾಂಗೆ
ಚಿಂತಿನಿಂದ ಕಾಡಿತಲ್ಲ ಮನಿ ಮಾರ ಮರಿಸಿತೆಲ್ಲ ಯಾಕ ?
ಆ ಪುಷ್ಯ ಮಾಸದಾಗ ,,,,, ಆ ಪುಷ್ಯ ಮಾಸದಾಗ ।ನಮ್ಮ ಮೊದಲ ಭೆಟ್ಟಿ
ನಿ ಕೈಗೆ ತಂದು ಕೊಟ್ಟಿ । ಆ ಮೊದಲ ಪ್ರೇಮ ಚೀಟಿ
ಮಾಘ ಮಾಸದಾಗ ।ಆ ಪ್ರೀತಿ ಬೆಳೆತು ಗಟ್ಟಿ
ಇರಲಿಲ್ಲ ಕೇಳ ಹುಡಗಿ । ಈ ನನ್ನ ಮನಸ್ಸು ಖೊಟ್ಟಿ
ಫಾಲ್ಗುಣದಾಗ ಬಂದು । ನೀ ನನಗು ಮಾತು ಕೊಟ್ಟಿ
ಆ ಚೈತ್ರ ಮಾಸದಾಗ ।ವಸಂತ ರಾಗ ಹಾಡಿ
ಕೈಯಾಗ ಕೈಯ ಹಾಕಿ ।ನೀ ಬರತಿನೆಂದಿ ಜೋಡಿ
ವೈಶಾಖ ದಾಗ ಹುಡಗಿ । ನೀ ಮಾಡಿದೆಲ್ಲ ಮೋಡಿ
ಆ ಜೈಷ್ಠ ಮಾಸದಾಗ । ಮಳೆಗಾಲ ಬಂತು ಕೂಡಿ
ಆಷಾಡದಾಗ ಹುಡಗಿ ।ಆಗಿತ್ತ ಏನ ಧಾಡಿ
ಎ ಯಾಕ ಒಡಲಿಲ್ಲ ಮುಂದ ನಮ್ಮ ಪ್ರೀತಿ ಗಾಡಿ
ಶ್ರಾವಣ ಮಾಸದಾಗ । ಹೊರ ಬಿಟ್ಟು ಪ್ರೀತಿ ರಾಡಿ
ಆಶ್ವಿಜ ಮಾಸದಾಗ ।ನಿಮ್ಮಪ್ಪ ಬಂದ ಓಡಿ
ನಿ ಇದ್ದಿಯೆಲ್ಲ ಹುಡಗಿ ಆಗ ನನ್ನ ಜೋಡಿ
ಬ್ಯಾರೆಯ ಗಂಡ ನಿನಗ ।ನಿಮ್ಮಪ್ಪ ಆಗ ಹುಡುಕಿ
ಬಂದ ಮುಚ್ಚಿದಲ್ಲ ।ಆ ನಮ್ಮ ಪ್ರೀತಿ ಖಿಡಕಿ
ಕಾರ್ತೀಕ ಮಾಸದಾಗ ।ನಿ ಮದುವಿ ಯಾಗುನಂದಿ
ನಿಮ್ಮಪ್ಪ ಸುದ್ದಿ ತಿಳದ ।ಕುಡಸ್ಯಾನ ಊರ ಮಂದಿ
ಆ ಹಸಿರು ಬಳೆಯ ನೋಡಿ ।ಈ ಮನಸು ಆತ ಚಿಂದಿ
ಆ ಮಾರ್ಗ ಶಿರಮಾಸದಾಗ ಹುಡಗಿ ಊರಿಗೆ ಬಂದಿ
ಹ್ವಾದ ವರಸ ಹ್ಯಾಂಗಿದ್ದಿ ಈಗ ಹ್ಯಾಂಗ ಆದಿ
[ಕೋರಸ] ಹ್ವಾದ ವರಸ ಹ್ಯಾಂಗಿದ್ದಿ, ಈಗ ಹ್ಯಾಂಗ ಆದಿ, ಈಗ ಹ್ಯಾಂಗ ಆದಿ ,[ಕೋರಸ]
ಏ ಹ್ವಾದ ವರಸ ಹ್ಯಾಂಗಿದ್ದಿ ಈಗ ಹ್ಯಾಂಗ ಆದಿ
ಒಂದು ಹಡೆದ ಮ್ಯಾಲ ಹುಡಗಿ ಭಾಳ ಸೊರಗಿ ಹ್ವಾದಿ
[ಕೋರಸ] ಒಂದು ಹಡೆದ ಮ್ಯಾಲ ಹುಡಗಿ ಭಾಳ ಸೊರಗಿ ಹ್ವಾದಿ [ಕೋರಸ]
ಚಿಂತಿನಿಂದ ಕಾಡಿತಲ್ಲ ಚಿಂತಿನಿಂದ ಕಾಡಿತಲ್ಲ ಮನಿ ಮಾರ ಮರಿಸಿತೆಲ್ಲ
ಬರ ಸಿಡಿಲು ,ಏ ಬರ ಸಿಡಿಲು ,ಬರ ಸಿಡಿಲು ಬಡಿದ ಮ್ಯಾಲ
ಪ್ರೀತಿ ಸುಟ್ಟು ಬೂದಿ ಆಯಿತಲ್ಲ
[ಕೋರಸ] ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ [ಕೋರಸ]
[ಸುಜಾತಾ ]ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ
[ಬಿ .ಆರ್ .ಛಾಯಾ] ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ
[ಕೋರಸ] ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ [ಕೋರಸ]
[ಬಿ .ಆರ್ .ಛಾಯಾ] ಉಡಿಯಕ್ಕಿ ಹಾಕುತನಕ ನಿ ಎಲ್ಲಿದ್ಯೋ ಜೋಕಮಾರ
ಮದುವಿಯಾದ,
[ಸುಜಾತಾ ] ಮದುವಿಯಾದ, ಮದುವಿಯಾದ ಗಂಡನ ಹೊರತ ನೆನಪಿಲ್ಲೊ ಯಾರ ಹೆಸರ
[ಕೋರಸ] ಮದುವಿಯಾದ ಗಂಡನ ಹೊರತ ನೆನಪಿಲ್ಲೊ ಯಾರ ಹೆಸರ [ಕೋರಸ]
[ಬಿ .ಆರ್ .ಛಾಯಾ] ಮದುವಿಯಾದ ಗಂಡನ ಹೊರತ ನೆನಪಿಲ್ಲೊ ಯಾರ ಹೆಸರ
[ಕೋರಸ] ಮದುವಿಯಾದ ಗಂಡನ ಹೊರತ ನೆನಪಿಲ್ಲೊ ಯಾರ ಹೆಸರ [ಕೋರಸ]