Baa Beldinglagi Balige Baa| Shabbir Dange kannada Janpad Lyirics
Baa Beldinglagi Balige Baa| Shabbir Dange kannada Janpad Lyirics
ಶಬ್ಬೀರ ಡಾಂಗೆಯವರ ಸಾವಿರಾರು ಜಾನಪದದಲ್ಲಿ ಈ ಒಂದು ಲವ್ ಫೀಲಿಂಗ್ ಜಾನಪದ ಗೀತೆ ಅದರ ಹೆಸರಿದೆ ಬಾ ಬೆಳದಿಂಗಳಾಗಿ ಬಳಿಗೆ ಬಾ . ಗೆಳೆಯರೆ ಈ ಹಾಡು ಈ ಜಾನಪದ ಸಾಹಿತ್ಯ ನೀವು ಓದಿದರೆ ನಿಮಗೂ ಕೂಡ ಮನದಲಿ ಏನೋ ಒಂಥರಾ ಕುತೂಹಲ ಮೂಡುತ್ತೆ . ಯಾಕಂದ್ರೆ ಈ ಭೂಮಿ ಮೇಲೆ ಮನುಷ್ಯನ ಜನ್ಮ ಧರಿಸಿ ಬಂದ ಮೇಲೆ ಹರೆಯದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಸಿಲಿಕುವದು ಸಹಜ . ನೀವು ಜೀವನದಲ್ಲಿ ಯಾರನ್ನಾದರೂ ಪ್ರೀತಿ ಮಾಡಿದಿದ್ದರೆ ಈ ಜನಪದ್ ಶೈಲಿಯ ಗೀತೆ ನಿಮಗಾಗಿ . ಶಬ್ಬೀರ ಡಾಂಗೆಯವರು ಬರೆದಂಥ ಈ ಜಾನ್ಪಡ್ ಗೀತೆ ಒಂದು ಬಾರಿ ಓದಿ .ನಿಮ್ಮ ಹಳೆ ನೆನಪುಗಳನ್ನು ನೆನಪಿಸಿಕೊಳ್ಳಿ .
ಹಾಡು .ಬಾ ಬೆಳದಿಂಗಳಾಗಿ ಬಳಿಗೆ ಬಾ
ಸಂಗೀತ . ಮೋಹನ್ ರಾಜ
ಸಾಹಿತ್ಯ. ಹಾಗು ಹಾಡಿದವರು : ಶಬ್ಬೀರ ಡಾಂಗೆ [ಮೂಡಲಗಿ]
ಬಾ ಬೆಳದಿಂಗಳಾಗಿ ಬಳಿಗೆ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ನೀ ಊರ್ವಶಿಯೊ ಇಲ್ಲ ಮೇನಕೆಯೊ ಹರೇ ಹಂಗಾಮಾ ಕರದೈತಿ ಬಾ
ನೀ ನನ್ನ ಬಾಳನು ಬೆಳಗು ಬಾ
ನೀ ನನ್ನ ಬಾಳನು ಬೆಳಗು ಬಾ
ನೀ ಊರ್ವಶಿಯೊ ಇಲ್ಲ ಮೇನಕೆಯೊ ಹರೇ ಹಂಗಾಮಾ ಕರದೈತಿ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ಚರಣ ೧
ನೀ ಉಟ್ಟ ಸಿರಿ ಜರತಾರಿ ।ನಿಂತ ನೋಡತಾರ ಜನ ನಿನ್ನ ಹೌಹಾರಿ
ಬ್ರಹಮ್ಮಮಾಡಿದ ನಿನ್ನ ಮನಸಾರಿ ।ಮೈ ಮನತಕ ನಾಚಿತು ಮಯೂರಿ
ನೀ ಉಟ್ಟ ಸಿರಿ ಜರತಾರಿ ।ನಿಂತ ನೋಡತಾರ ಜನ ನಿನ್ನ ಹೌಹಾರಿ
ಬ್ರಹಮ್ಮಮಾಡಿದ ನಿನ್ನ ಮನಸಾರಿ ।ಮೈ ಮನತಕ ನಾಚಿತು ಮಯೂರಿ
ನಿನ್ನ ಹೆಜ್ಜೆಗೆ ಗೆಜ್ಜಿ ಕುಣದಾವ ।ನಿನ್ನ ಲಜ್ಜಿಗಿ ಹೂ ಗೋನಿ ಬಾಗ್ಯಾವ
ಯಾರ ಕೊಲ್ಲಾಕ ಬಂದಿಯ ನೀ ……..
ಬಾ ಬೆಳದಿಂಗಳಾಗಿ ಬಳಿಗೆ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ನೀ ಊರ್ವಶಿಯೊ ಇಲ್ಲ ಮೇನಕೆಯೊ ಹರೇ ಹಂಗಾಮಾ ಕರದೈತಿ ಬಾ
ನೀ ನನ್ನ ಬಾಳನು ಬೆಳಗು ಬಾ
ಚರಣ ೨
ನೀ ನಡೆದರೆ ತೇರಿನ ಸಿಂಗಾರ ।ಮೈ ಮರೆಸುವ ರಾಜ ಕಳಿ ಗಂಭೀರ
ನೋಡಬೇಕ ಹುಡಗಿ ನಿನ್ನ ದರಬಾರ ।ನಿನ್ನ ಮಾತಂದ್ರ ತಿಂದಾಂಗ ಜಾಂಗೀರ
ನೀ ನಡೆದರೆ ತೇರಿನ ಸಿಂಗಾರ ।ಮೈ ಮರೆಸುವ ರಾಜ ಕಳಿ ಗಂಭೀರ
ನೋಡಬೇಕ ಹುಡಗಿ ನಿನ್ನ ದರಬಾರ ।ನಿನ್ನ ಮಾತಂದ್ರ ತಿಂದಾಂಗ ಜಾಂಗೀರ
ಜೋಡಿ ಆದರ ಚಂದೈತಿ ಸಂಸಾರ ।ನಿನಗಾಗಿ ಮರತೇನಿ ನಮ್ಮೂರ
ನಾ ನಿನ್ನ ಸರದಾರ …….
ಬಾ ಬೆಳದಿಂಗಳಾಗಿ ಬಳಿಗೆ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ನೀ ಊರ್ವಶಿಯೊ ಇಲ್ಲ ಮೇನಕೆಯೊ ಹರೇ ಹಂಗಾಮಾ ಕರದೈತಿ ಬಾ
ನೀ ನನ್ನ ಬಾಳನು ಬೆಳಗು ಬಾ
ಚರಣ ೩
ನಿನ್ನ ಹಾಡಿಗೆ ಹೂರಾಶಿ ಹಾಸಿನಿ ।ಕೆಡವಿದರ ನಿನ್ನ ಕೈ ಹಿಡಿತೀನಿ
ನಿನ್ನ ನಗುವಲಿ ಗೆಲುವನ್ನೆ ಕಾಣ್ತಿನಿ ।ನಿನ್ನ ಜಾಗವಾ ಮರೆತೀನಿ
ನಿನ್ನ ಹಾಡಿಗೆ ಹೂರಾಶಿ ಹಾಸಿನಿ ।ಕೆಡವಿದರ ನಿನ್ನ ಕೈ ಹಿಡಿತೀನಿ
ನಿನ್ನ ನಗುವಲಿ ಗೆಲುವನ್ನೆ ಕಾಣ್ತಿನಿ ।ನಿನ್ನ ಜಾಗವಾ ಮರೆತೀನಿ
ಹಸೆಮಣೆಯೂ ನಮ್ಮನ್ನು ಕರದೈತಿ ।ಹೊಸ ಬಾಳು ನಮಗ ಕಾದೈತಿ
ಈ ಜೀವಾ ಮಿಡಿದೈತಿ ……..
ಬಾ ಬೆಳದಿಂಗಳಾಗಿ ಬಳಿಗೆ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ನೀ ಊರ್ವಶಿಯೊ ಇಲ್ಲ ಮೇನಕೆಯೊ ಹರೇ ಹಂಗಾಮಾ ಕರದೈತಿ ಬಾ
ನೀ ನನ್ನ ಬಾಳನು ಬೆಳಗು ಬಾ
ನೀ ನನ್ನ ಬಾಳನು ಬೆಳಗು ಬಾ
ನೀ ನನ್ನ ಬಾಳನು ಬೆಳಗು ಬಾ
ನೀ ಊರ್ವಶಿಯೊ ಇಲ್ಲ ಮೇನಕೆಯೊ ಹರೇ ಹಂಗಾಮಾ ಕರದೈತಿ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ಬಾ ಬೆಳದಿಂಗಳಾಗಿ ಬಳಿಗೆ ಬಾ
ನಮ್ಮ ಎಲ್ಲ ಜನಪದ್ ಹಿಂದಿ ಕನ್ನಡ ಯೌಟ್ಯೂಬ್ ಚನ್ನೆಲಗಳನ್ನು ಸಬ್ಸ್ಕ್ರೈಬ್ ಮಾಡಿ ಕೆಳಗೆ ಲಿಂಕನ್ನು ಒತ್ತಿ