SHRISHAIL KAGAL KANNADA JANPAD SONG LYIRICS

Published by mandmoulya on

ಹಳಿಯ ಗೆಳತನ ಹರಿಸೈತೋ ತಾಳಿ

ಹೆಣ್ಣು :

ಹಳಿಯ ಗೆಳತನ ಹರಿಸೈತೋ ತಾಳಿ

ಬಿಸೈತೋ ಬಿರುಗಾಳಿ ಬರತೇನೊ ಹೊಳ್ಳಿ ನಾಳಿ

ಬೆಳತನಕ ಬಡದಾರೊ ಹಾಕಿ ಬಾಗಿಲದಗಲಿ

ಗಂಡು :

ಕಟ್ಟಿದ ತಾಳಿ ಉಚ್ಚಿ ಹರಿತಿ ಯಾಕ

ಮಾಡಬ್ಯಾಡ ಮನಸ ಕಲಕ ತಿಳಿಕೋರ ನಿನ್ನ ಮನಕ

ಕಡಿತನಕ ಅಳುದಾತ ಓ ಗೆಳತಿ ನಿನ್ನ ಹೆಣಕ

ಚರಣ್ ೧: ಹೆಣ್ಣು

ಬದಲ ಬಚ್ಚಲ ದಿವಸ ಬಂತೊ ನೋಡೊ ನಿನ್ನ ಪತ್ರ

ಅದನ್ನ ಕೊಟ್ಟಿದ್ದಿ ಗೆಳೆಯಾ ನೀನು ಯಾರ ಹತ್ರ

ಹೊಂಚ ಹಾಕಿ ಕುತಗಿ ಕೋದಾನ ನಿನ್ನ ಮಿತ್ರ

ಗಂಡಗ ಗೊತ್ತಾಯಿತೊ ಒಗತನ ಮುರದ ಹೋಯಿತೊ

ಅದಕ್ಕಾಗಿ ಗಂಡ ಮುಟ್ಟಿ ಆಡಿಲ್ಲ ಒಂದ ಮಾತಾ

ಗಂಡು :

ಕಟ್ಟಿದ ತಾಳಿ ಉಚ್ಚಿ ಹರಿತಿ ಯಾಕ

ಮಾಡಬ್ಯಾಡ ಮನಸ ಕಲಕ ತಿಳಿಕೋರ ನಿನ್ನ ಮನಕ

ಕಡಿತನಕ ಅಳುದಾತ ಓ ಗೆಳತಿ ನಿನ್ನ ಹೆಣಕ

ಚರಣ ೨: ಗಂಡು

ಕೈಯಾಗ ಕಡ್ಡಿ ಕೊಟ್ಟ ಹೇಳಿದ್ನಿ ಗೆಳತಿ ನಿನಗ ಮೊದಲ

ಗೆಳತಿ ನಡದಿಯೆಲ್ಲ ಮರತ ಬಡವನ ಗುಡಿಸಲ

ರಾತ್ರಿ ಕಂಡ ಬಾವಿ ಹಗಲು ಬೀಳಾಕ ಹುಚ್ಚಲ್ಲ

ಬ್ಯಾಡಾಯಿತೇನ ಹೊಸ ಮಂಚ ಹಾಕಿ ಬಂದ್ಯಾ ಹೊಸ ಸಂಚ

ಅತ್ತತ್ತ ಅಡ್ಡ ಬಿದ್ದರು ಹೇಳಲಾರದ ಹ್ವಾದಿ ಕೊಂಚ

ಹೆಣ್ಣು :

ಹಳಿಯ ಗೆಳತನ ಹರಿಸೈತೋ ತಾಳಿ

ಬಿಸೈತೋ ಬಿರುಗಾಳಿ ಬರತೇನೊ ಹೊಳ್ಳಿ ನಾಳಿ

ಬೆಳತನಕ ಬಡದಾರೊ ಹಾಕಿ ಬಾಗಿಲದಗಲಿ

ಚರಣ ೩:ಹೆಣ್ಣು

ಸಂಷೆಯ ಮಾತ ಇನ್ನ್ಯಾಕ ಹೊಗತೇನ ನಡಿ ದೇವರ ಗುಡಿಯ

ಇಲ್ಲಂದ್ರ ಅಡ್ಡ ಹಾಕಿ ನಿನ್ನ ಕೈಯ್ಯಾರ ನನ್ನ ಕಡಿಯ

ನಂಬಿಕೆ ಇದ್ದರ ಬಂದು ನನ್ನ ಕೈಯ್ಯಾ ಹಿಡಿಯ

ನಿನ್ನ ಹೆಸರ ನುಡಿತೈತೋ ಹಿಡದ ನೋಡ ನನ್ನ ನಾಡಿ

ಬಿದ್ದೇನೊ ನಾ ಬಂದ ನಿನ್ನ ಪಾದ ದಾಡಿ

ಗಂಡು :

ಕಟ್ಟಿದ ತಾಳಿ ಉಚ್ಚಿ ಹರಿತಿ ಯಾಕ

ಮಾಡಬ್ಯಾಡ ಮನಸ ಕಲಕ ತಿಳಿಕೋರ ನಿನ್ನ ಮನಕ

ಕಡಿತನಕ ಅಳುದಾತ ಓ ಗೆಳತಿ ನಿನ್ನ ಹೆಣಕ

ಚರಣ ೪: ಗಂಡು

ಹೋಗತಿಯಾಕ ಸುಳ್ಳ ಗೆಳತಿ ನಿ ದೇವರ ಗುಡಿ

ನೀ ನನ್ನ ಪಾಲಿಗಿ ಎಂದಿಗೂ ಮೀಸಲ ಯಡಿ

ಹಿಡಿತೇನ ಕೈಯ ಜಗದ ರೀತಿ ದೂರ ಮಾಡಿ

ಕಡಿದರ ಕಡಿಯಲಿ ನಿಮ್ಮ ಮನಿ ಮಂದಿ ಕೂಡಿ

ನನ್ನ ಪ್ರೀತಿ ಓ ಹೂವೆ ನಿ ಹೋಗದಿರು ಬಾಡಿ

ಹೆಣ್ಣು :

ಹಳಿಯ ಗೆಳತನ ಹರಿಸೈತೋ ತಾಳಿ

ಬಿಸೈತೋ ಬಿರುಗಾಳಿ ಬರತೇನೊ ಹೊಳ್ಳಿ ನಾಳಿ

ಬೆಳತನಕ ಬಡದಾರೊ ಹಾಕಿ ಬಾಗಿಲದಗಲಿ

ಗಂಡು :

ಕಟ್ಟಿದ ತಾಳಿ ಉಚ್ಚಿ ಹರಿತಿ ಯಾಕ

ಮಾಡಬ್ಯಾಡ ಮನಸ ಕಲಕ ತಿಳಿಕೋರ ನಿನ್ನ ಮನಕ

ಕಡಿತನಕ ಅಳುದಾತ ಓ ಗೆಳತಿ ನಿನ್ನ ಹೆಣಕ

SHRISHAIL KAGAL UTTAR KARANATAK FOLK SINGER

GELATI DOORADARE KANNANA JANPAD SONG

ಗೆಳತಿ ದೂರಾದರೆ ನನಗೆ ಯಾರಾಸರೆ

ಗಂಡು :

ಗೆಳತಿ ದೂರಾದರೆ ನನಗೆ ಯಾರಾಸರೆ

ಉಡಿಯಕ್ಕಿ ಹಾಕೊಂಡ ನೀ ಹೋದರ

ತೇಗಿಬ್ಯಾಡ ನೀ ಕಣ್ಣೀರ ನನ್ನ ಮಣ್ಣ ಕೊಡಾಕ ಬಾರ

ಹೆಣ್ಣು :

ಗೆಳೆಯಾ ಏನ ಮಾಡಲಿ ನಿನಗ ಹೆಂಗ ಹೇಳಲಿ

ಹೊತ್ತ ಹೊಂಟರ ಮದುವಿ ನನ್ನ ನಾಳಿ

ಹೋಗಲಿ ಹೆಂಗ ನಿನ್ನಗಲಿ ಜಿವಿರುತನ ಹೆಂಗ ಮರಿಯಲಿ

ಚರಣ ೧:ಗಂಡು

ಕಣ್ಣಾಗ ನಿ ನನ್ನ ಕಾಡಿ ಮನಸಿನೊಳಗ ನಿ ಮೂಡಿ

ಹಾಕಿ ಹೊಂಟ್ಟಹೆಂಗ ಈಗ ನನ್ನ ಪ್ರೀತಿಗೆ ಬೇಡಿ

ಹೆಣ್ಣು :

ನಿನ್ನ ನೆನಪಲಿ ಕುಳಿಲ್ಲದೆ ಕಣ್ಣಿರಲಿ ನಾ ಕುಂತೀನಿ

ನಿನ್ನ ನೆನಪಲ್ಲಿ ಕೊರಗಿ ಹಾಸಿಗಿ ಹಿಡದಿನಿ

ನಂಬು ನೀ ನನ್ನಾಣೆ

ಹೋಗ ಬ್ಯಾಡ ನಿ ನನ್ನಗಲಿ ಜಿವಿರುತನ ಹೆಂಗ ಮರೆಯಲಿ

ಚರಣ ೨:ಹೆಣ್ಣು

ನನ್ನ ಪ್ರೀತಿಯ ಸುದ್ದಿ ತಿಳದ ಈ ಮನಿ ಮಂದಿ

ಅಸ್ತಿ ಐತೆಂತ ಆರದ ಕೊಟ್ಟಾರೋ ಮುದಕಗ

ಗಂಡು :

ಮನಸೊಬ್ಬಗ ಮೈ ಒಬ್ಬಗ ಕೊಟ್ಟ ನೀನು ಹೊಂಟಿ ಹೆಂಗ

ಬಂದ ಮನಿ ಬಿಟ್ಟ ನೋಡ ಐತಿ ನನ್ನ ಗುಬ್ಬಿ ಗುಡ

ಗೂಡಲಿ ಆಗೋನು ಜೋಡ

ನನ್ನ ಕೈಯ ನೀ ಬಿಡಬ್ಯಾಡ ನನ್ನ ಕೈಯ ನೀ ಬಿಡಬ್ಯಾಡ

ಚಾರಣ ೩:ಹೆಣ್ಣು

ಬಂದೀನಿ ನಾ ಮನಿ ಬಿಟ್ಟ ಎಲ್ಲ್ಯಾರ ಕಟ್ಟುನು ಗಂಟ

ಬ್ಯಾಡ ಈ ಮಂದಿ ನೆಲ್ಲಾ ಕುಡಾಕ ಬಿಡುದಿಲ್ಲ ಕಳ್ಳ

ಗಂಡು :

ಅಂಜ ಬ್ಯಾಡ ನೀ ತಾಳಿ ಕಟ್ಟತೀನಿ ಉಸಿರಿರುತನ ಬಿಡಲಾರೆನಾ

ಸತ್ತರು ಸಾಯೋನು ಕೂಡಿ ಗೊರ್ಯಾಗ ಹೋಗೋನು ಜೋಡಿ

ಬಿಟ್ಟಹೋಗುದು ಬ್ಯಾಡಿನ್ನ ಓಡಿ

ಬಾಳೋನು ಇಬ್ಬರು ಕೂಡಿ ಬಾಳೋನು ಇಬ್ಬರು ಕೂಡಿ

ಗೆಳತಿ ದೂರಾದರೆ ನನಗೆ ಯಾರಾಸರೆ

ಉಡಿಯಕ್ಕಿ ಹಾಕೊಂಡ ನೀ ಹೋದರ

ತೇಗಿಬ್ಯಾಡ ನೀ ಕಣ್ಣೀರ ನನ್ನ ಮಣ್ಣ ಕೊಡಾಕ ಬಾರ

 ಹೆಣ್ಣು : ಮತ್ತ್ಯಾಕ ಆ ಮಾತ ಮತ್ತ್ಯಾಕ ಆ ಮಾತ

BIJAPUR BASTYANDDAG LOVE JANPAD SONG SHRISHAIL KAGAL

ಬಿಜಾಪುರ ಬಸ್ಟ್ಯಾಂಡದಾಗ ಕಾಲೆಜ್ ಬಿಟ್ಟ ನಾ ಬಂದಾಗ

ಗಂಡು :ಬಿಜಾಪುರ ಬಸ್ಟ್ಯಾಂಡದಾಗ ಕಾಲೆಜ್ ಬಿಟ್ಟ ನಾ ಬಂದಾಗ

        ನಿಂತಿತ್ತ ಹುಡಗಿ ನನ್ನ ಎದುರಾಗ ಬಾಳ ಚಂದಿತ್ತು ಮೈ ಕಟ್ಟಿನ್ಯಾಗ

        ಬಸ್ಟ್ಯಾಂಡ ಕಣ್ಣ ನಿನ್ನ ಮ್ಯಾಗ

ಹೆಣ್ಣು :  ಯಾಕೋ ಹುಡಗಾ ನೋಡಾಕತ್ತಿ . ಬಾಳೋತ್ತಾತ್ ನಗಾಕತ್ತಿ

        ಒಂದ ಕೊಟ್ಟರ ಚೊಣ್ಣ ಆಗಿತ್ತು ಸೈಲಾ

        ನನ್ನೋಡಿ ಸುರಸಬ್ಯಾಡ ಜೊಲ್ಲ ಮುಚಕೊರೊ ಬಾಯಿ ಒಳ್ಗಿನ ಹಲ್ಲ

ಚರಣ ೧

ಗಂಡು : ಕಣ್ಣಮುಂದ ನೂರಾರು ಹುಡಗ್ಯಾರು ಸಾಲ

         ಅದರಾಗ ಎದ್ದ ಕಾಣತಿ ನೀ ಒಂದ ಮಾಲ

         ಗಲ್ಲಾ ನೋಡಿದರ ಕೊಡಾಂಗಾಕ್ಕೈತಿ ಬೆಲ್ಲ

        ಬೆಲ್ಲ ಕೊಡಾಕ ಹೋಗಿ ಕಪಾಳಿಗೆ ಕೊಟ್ಟರ ಹೆಂಗ ಮಾಡ್ಲ್ಯೊ ಅಲ್ಲಾ

ಹೆಣ್ಣು :  ನನ್ನ ಗಲ್ಲಕ್ಕ ಬೆಲ್ಲ ಕೋಡಾವ ನೀ ಯಾ ಊರ ಬಹಾದ್ದೂರ

        ಗಟ್ಟಿ ಐತಿಲ್ಲೋ ನೋಡ ಆ ನಿನ್ನ ಉಡದಾರ

        ಹರೇ ಬಂದರ ಹಾದಿ ಹೋಗೊ ಹಂದಿನು ಚಂದ್

        ಬೆಲ್ಲ ಕೊಡಾಕ ನಿವೇನ ಆಗುದಿಲ್ಲ ಹಿಂದ ಮುಂದ

ಗಂಡು :ಬಿಜಾಪುರ ಬಸ್ಟ್ಯಾಂಡದಾಗ ಕಾಲೆಜ್ ಬಿಟ್ಟ ನಾ ಬಂದಾಗ

        ನಿಂತಿತ್ತ ಹುಡಗಿ ನನ್ನ ಎದುರಾಗ ಬಾಳ ಚಂದಿತ್ತು ಮೈ ಕಟ್ಟಿನ್ಯಾಗ

        ಬಸ್ಟ್ಯಾಂಡ ಕಣ್ಣ ನಿನ್ನ ಮ್ಯಾಗ

ಹೆಣ್ಣು : ಯಾಕೋ ಹುಡಗಾ ನೋಡಾಕತ್ತಿ . ಬಾಳೋತ್ತಾತ್ ನಗಾಕತ್ತಿ

        ಒಂದ ಕೊಟ್ಟರ ಚೊಣ್ಣ ಆಗಿತ್ತು ಸೈಲಾ

        ನನ್ನೋಡಿ ಸುರಸಬ್ಯಾಡ ಜೊಲ್ಲ ಮುಚಕೊರೊ ಬಾಯಿ ಒಳ್ಗಿನ ಹಲ್ಲ

ಚರಣ ೨

ಹೆಣ್ಣು :ಸೂರ್ಯನ ಸಂಜಿ ಬಿಸಿಲ ಮಾರಿ ಮ್ಯಾಗ ಬಿದ್ದಯ್ಯತಿ

       ಕಣ್ಣು ಕುಕ್ಕದಕ ಕಣ್ಣ ಹೊಡದಂಗ ಮಾಡತಿ

       ಆಕಳಿಸೊ ನೆವಾ ಮಾಡಿ ಸೊನ್ನಿಯ ಕೊಡತಿ

       ಮೀಸಿ ಬಂದಿಲ್ಲ ಇನ್ನು ಎಷ್ಟರ ಹಾರ್ಯಾಡತಿ

ಗಂಡು :ಬೆಳ್ಳನ ಮಾರಿಗಿ ಕೆಂಪಾನ ಗಾಗಲ್ಲ

        ಹಾಕೊಂಡ ಒಳಒಳಗ ಕೊಡತಿದ್ದಿ ಡಿಂಪಲ್ಲ

        ಕಣ್ಣಾಗ ಕಾಗಲ ಮಾಡಬ್ಯಾಡ ಪಾಗಲ್ಲ

        ತೇಲಿ ಕೆಟ್ಟರ ನಿನ್ನ ಬೆನ್ನ ನಾ ಒಟ್ಟ ಬಿಡುದಿಲ್ಲ

ಗಂಡು :ಬಿಜಾಪುರ ಬಸ್ಟ್ಯಾಂಡದಾಗ ಕಾಲೆಜ್ ಬಿಟ್ಟ ನಾ ಬಂದಾಗ

        ನಿಂತಿತ್ತ ಹುಡಗಿ ನನ್ನ ಎದುರಾಗ ಬಾಳ ಚಂದಿತ್ತು ಮೈ ಕಟ್ಟಿನ್ಯಾಗ

        ಬಸ್ಟ್ಯಾಂಡ ಕಣ್ಣ ನಿನ್ನ ಮ್ಯಾಗ

ಹೆಣ್ಣು : ಯಾಕೋ ಹುಡಗಾ ನೋಡಾಕತ್ತಿ . ಬಾಳೋತ್ತಾತ್ ನಗಾಕತ್ತಿ

        ಒಂದ ಕೊಟ್ಟರ ಚೊಣ್ಣ ಆಗಿತ್ತು ಸೈಲಾ

        ನನ್ನೋಡಿ ಸುರಸಬ್ಯಾಡ ಜೊಲ್ಲ ಮುಚಕೊರೊ ಬಾಯಿ ಒಳ್ಗಿನ ಹಲ್ಲ

ಚರಣ ೩::

ಗಂಡು : ಬಸ್ಸ ಬಂತಂತ ನೀ ಓಡಿ ಹೊಂಟಾಗ

         ಮರತ ಕಾಲಿಟ್ಟಿ ಬಾಳಿ ಸೊಟ್ಟಿಯ ಮ್ಯಾಗ

         ಬಂದು ಬಿದ್ದೆಲ್ಲಾ ಈ ನನ್ನ ತೆಕ್ಕ್ಯಾಗ

         ಹೆಂಗಾತ ಎ ಹುಡಗಿ ಆ ನಿನ್ನ ಎದಿಯಾಗ

ಹೆಣ್ಣು : ಏನಂತ ಹೇಳಲಿ ಮಲಗಾಣದ ಮಾವ

        ಕ್ಷಣದಾಗ ನನ್ನ ಮೈಯ ಆಗಿತ್ತ ತ್ಯಾವಾ

        ಬಾಳಿಕಾಯಿ ಕುಡಿಸ್ತಾನ್ದರ ಬಾಳಿಕಾಯಿ ಬೀಗ ಆಗಾವಾ

        ನಾಳಿ ಕಾಯೊ ಬರತಿನಿ ಇದೆ ಜಾಗಾ ಗಾವಾ

ಗಂಡು :ಬಿಜಾಪುರ ಬಸ್ಟ್ಯಾಂಡದಾಗ ಕಾಲೆಜ್ ಬಿಟ್ಟ ನಾ ಬಂದಾಗ

        ನಿಂತಿತ್ತ ಹುಡಗಿ ನನ್ನ ಎದುರಾಗ ಬಾಳ ಚಂದಿತ್ತು ಮೈ ಕಟ್ಟಿನ್ಯಾಗ

         ಬಸ್ಟ್ಯಾಂಡ ಕಣ್ಣ ನಿನ್ನ ಮ್ಯಾಗ

ಹೆಣ್ಣು : ಯಾಕೋ ಹುಡಗಾ ನೋಡಾಕತ್ತಿ . ಬಾಳೋತ್ತಾತ್ ನಗಾಕತ್ತಿ

        ಒಂದ ಕೊಟ್ಟರ ಚೊಣ್ಣ ಆಗಿತ್ತು ಸೈಲಾ

        ನನ್ನೋಡಿ ಸುರಸಬ್ಯಾಡ ಜೊಲ್ಲ ಮುಚಕೊರೊ ಬಾಯಿ ಒಳ್ಗಿನ ಹಲ್ಲ


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।