Kannada Janpad Song Lyirics|Gandan Maniyag Nanu|
ಎಂ .ಡಿ .ಆನಂದ ಹಾಡಿರುವ ಸುಪ್ರಸಿದ್ದ ಜನಪದ್ ಗೀತೆ ಕೆಳಗೆ ಓದಿ ಆನಂದಿಸಿ. ಜಾನಪದ್ ಗೀತೆಗಳು ನಮ್ಮ ಉತ್ತರ ಕರ್ನಾಟಕದ ಸಂಸ್ಕೃತಿ. ಈ ಜನಪದ್ ಗೀತೆಗಳು ನಮ್ಮ ಸಾಹಿತ್ಯಗಾರರು ಹಾಗು ಗಾಯಕರು ತಮ್ಮ ಅಕ್ಕ ಪಕ್ಕ ನಡೆಯುವ ದಿನನಿತ್ಯ ಘಟನೆಗಳನ್ನು ಹಾಡಿನ ರೂಪಕವಾಗಿ ಬರೆದು ಹಾಡಿ ಜನರಿಗೆ ಮನೋರಂಜನ ಮಾಡುತ್ತಾರೆ.
ಗಂಡನ ಮನಿಯಾಗ ನಾನು ಕೂತಕೊಂಡ ತಿನ್ನಾಕಿ
ನಾ ಹೇಳಿದ ಮಾತನ್ನ ಕೆಲಸಾಕಿ
ನನ್ನ ಮನಸಿಗೆ ಬಂದಂಗ್ ಕುಣಸಾಕಿ
ಚರಣ 1
ಮುಂಜಾನೆ ಎಂಟಕ ಎಳಾಕ್ಕಿ ಹಾಸ್ಗ್ಯಾಗ ಚಾ ನಾ ಕೇಳಾಕಿ
ಮುಂಜಾನೆ ಎಂಟಕ ಎಳಾಕ್ಕಿ ಹಾಸ್ಗ್ಯಾಗ ಚಾ ನಾ ಕೇಳಾಕಿ
ಇದರೊಳಗ ಯಾರರ ಎಬ್ಸಾಕ ಬಂದ್ರ
ಎಂಟ ರೊಳಗ ಯಾರರ ಇಬ್ಸಾಕ ಬಂದ್ರ
ಎದ್ದೊಂದ ಗೆಡ್ಡಿಗೆ ಇಳಸಾಕಿ
ಗಂಡನ ಮನಿಯಾಗ ನಾನು ಕೂತಕೊಂಡ ತಿನ್ನಾಕಿ
ನಾ ಹೇಳಿದ ಮಾತನ್ನ ಕೆಲಸಾಕಿ
ನನ್ನ ಮನಸಿಗೆ ಬಂದಂಗ್ ಕುಣಸಾಕಿ
ಚರಣ 2
ಅತ್ತಿಗೆ ಅಡಿಗಿಗೆ ಹಚ್ಚಾಕಿ ಮಾವಗ ನೀರಿಗೆ ಕಳಸಾಕಿ
ಅತ್ತಿಗೆ ಅಡಿಗಿಗೆ ಹಚ್ಚಾಕಿ ಮಾವಗ ನೀರಿಗೆ ಕಳಸಾಕಿ
ಗಂಡನ ರುಬಾಸಾಕ ಕುಡ್ರಸಾಕಿ |ಗಂಡನ ರುಬಾಸಾಕ ಕುಡ್ರಸಾಕಿ
ಒಲ್ಲೆ ಅಂದ್ರ ಉಪಾಸ ಕೆಡಸಾಕಿ
ಗಂಡನ ಮನಿಯಾಗ ನಾನು ಕೂತಕೊಂಡ ತಿನ್ನಾಕಿ
ನಾ ಹೇಳಿದ ಮಾತನ್ನ ಕೆಲಸಾಕಿ
ನನ್ನ ಮನಸಿಗೆ ಬಂದಂಗ್ ಕುಣಸಾಕಿ
ಚರಣ 3
ಮೈದನನ ಹೊಲಕ ಕಳಸಾಕಿ ನಾದನಿನ ಕಸ ಮುಸರಿ ಹಚ್ಚಾಕಿ
ಮೈದನನ ಹೊಲಕ ಕಳಸಾಕಿ ನಾದನಿನ ಕಸ ಮುಸರಿ ಹಚ್ಚಾಕಿ
ವಾರಗಿತ್ತಿ ನ ಕರಸಾಕಿ ವಾರಗಿತ್ತಿ ನ ಕರಸಾಕಿ
ಕೂತಕೊಂಡ ಇಸ್ಪೇಟ ಆಡಾಕಿ
ಗಂಡನ ಮನಿಯಾಗ ನಾನು ಕೂತಕೊಂಡ ತಿನ್ನಾಕಿ
ನಾ ಹೇಳಿದ ಮಾತನ್ನ ಕೆಲಸಾಕಿ
ನನ್ನ ಮನಸಿಗೆ ಬಂದಂಗ್ ಕುಣಸಾಕಿ
ಚರಣ 4
ಗಂಡನ ದುಡಿಯಾಕ ಕಳಸಾಕಿ ಬಂದ ಪಗಾರೆಲ್ಲ ಕಸಿಯಾಕಿ
ಗಂಡನ ದುಡಿಯಾಕ ಕಳಸಾಕಿ ಬಂದ ಪಗಾರೆಲ್ಲ ಕಸಿಯಾಕಿ
ಖರ್ಚಿಗೆ ನಾನೆ ಕೊಡುವಾಕಿ |ಮನಿ ಖರ್ಚಿಗೆ ನಾನೆ ಕೊಡುವಾಕಿ
ಉಳದಿದ್ದ ಪರ್ಸಿಗೆ ತುರ್ಕಾಕಿ
ಗಂಡನ ಮನಿಯಾಗ ನಾನು ಕೂತಕೊಂಡ ತಿನ್ನಾಕಿ
ನಾ ಹೇಳಿದ ಮಾತನ್ನ ಕೆಲಸಾಕಿ
ನನ್ನ ಮನಸಿಗೆ ಬಂದಂಗ್ ಕುಣಸಾಕಿ
ಚರಣ 5
ಅನ್ಬೇಕ ಇಂಥಾಕಿ ಯಾರಿಕಿ ವೆವಸ್ಥೆ ಎದುರಿಸಿ ನಿಂತಾಕಿ
ಅನ್ಬೇಕ ಇಂಥಾಕಿ ಯಾರಿಕಿ ವೆವಸ್ಥೆ ಎದುರಿಸಿ ನಿಂತಾಕಿ
ಇತಿಹಾಸ ಬದಲ ಮಾಡಾಕಿ |ನಾ ಇತಿಹಾಸ ಬದಲ ಮಾಡಕಿ
ಯಾಕಂದ್ರ ಹತ್ತ ಲಕ್ಷ ವರದಕ್ಷಣಿ ಕೊಟ್ಟಾಕಿ
ಗಂಡನ ಮನಿಯಾಗ ನಾನು ಕೂತಕೊಂಡ ತಿನ್ನಾಕಿ
ನಾ ಹೇಳಿದ ಮಾತನ್ನ ಕೆಲಸಾಕಿ
ನನ್ನ ಮನಸಿಗೆ ಬಂದಂಗ್ ಕುಣಸಾಕಿ
ಈ ಹಾಡನ್ನು ಕೇಳಲು ನೋಡಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಈ ಹಾಡು ಓದಿದ ನಂತರ ನಿಮ್ಮ ಅನಿಶಿಕೆ ಗಳನ್ನೂ ತಿಳಿಸಿ ಹಾಗು ನಮ್ಮ ಕನ್ನಡ, ಹಿಂದಿ ,ಯೌಟ್ಯೂಬ್ ಚನ್ನೆಲಗಳನ್ನೂ SUBSCRIBE ಮಾಡಿ ಧನ್ಯವಾದಗಳು
BASHA KHAN OFFICIAL
FOLK STARS
FOLK STARS COMEDY
DREAM HOUSE
धन्यवा