KANNADA FONG SONG LYIRICS|JANPAD LYRICS |ಹಿಂಗ ನಡದೈತೋ SIDDAPPA BIDARI |

Published by mandmoulya on

JANPAD LYIRICS |ಹಿಂಗ ನಡದೈತೋ SIDDAPPA BIDARI |KANNADA FOLK SONG LYIRICS
ಹಿಂಗ ನಡದೈತೋ

https://wp.me/pavd82-5N

ಹಿಂಗ ನಡದೈತೊ ಇದು ಹಿಂಗ ನಡದೈತೋ ದೇವ ಲೋಕದಾಗ ಆದಿಕಾಲದಾಗ ಹಿಂಗ ನಡದೈತೋ

ಮುಂದಕ ಹೋಗಬೇಕೆನ್ನುವರನ್ನು ಹಿಂದಕ ಜಗ್ಗುವದು . ಅಧಿಕಾರದಾಗ ಇದ್ದಾವ ಇಳಿಸಿ ಮತ್ತೊಬ್ಬ ಹತ್ತುವುದು ಸುಖ ಅನ್ನೋದ ಕಂಡೆ ಇಲ್ಲಾ ಯಾವ ಕಾಲಕ್ಕ ದೇವಾದಿಗಳು ದೈತ್ಯರು ಜಗಳಾ ಅಧಿಕಾರದ ಆಸೇಕು . ದೇವಾದಿಗಳ ದೈತ್ಯರ ಮನಗಾದ ತುಂಬೈತಿ ಹೊಟ್ಟೆಕಿಚ್ಚಾ ಹಂತಿಂತವನ್ನೂ ಬಿಟ್ಟಿಲ್ಲಪ್ಪಾ ಅಧಿಕಾರದ ಹುಚ್ಚಾಲೆ ದೇವಾದಿಗಳು ದೈತ್ಯರು ಸಮುದ್ರ ಮಂಥನ ಮಾಡಿದ ಅಕಾಡಿ ಇಕಾಡಿ ಜಗ್ಯಾರಪ್ಪಾ ಆದಿಶೇಷಣ ಹಗ್ಗ ಮಾಡಿ ಸಮುದ್ರ ಮಂಥನ ಮಾಡಿ ತೆಗದಾರು ಅಮೃತದ ಬೆಣ್ಣೆ ದೇವಾದಿ ದೈತ್ಯರ ನಡುವೆ ತಯಾರಾಗ್ಯಾಳ ಮೋಹಿನಿ

ಭಕ್ತಿಮಾಡಿ ಆತ್ಮಲಿಂಗ ತಂದಾನೋ ರಾವಣ ಕಾಣದ್ದಂಗ ಭಕ್ತಿಹಾಳ ಮಾಡಿ ಇಟ್ಟಾನ ಗಣಪನ ಒಳ್ಳಾ ಮಂದಿ ಗೂಡಾ ದುಷ್ಟ ಮಂದಿರು ಯಾವಾಗಿದ್ದು ಜಗಳ ಒಳ್ಳಾವು ಮರಗಿ ಕೊಟ್ಟರ ಶಾಪ ದುಷ್ಟರಾಗುದು ಹಾಳ ಭೂಮಿಯ ಮಾಲ ಹೆಚಾದಾಗ ಕರ್ಮ ಕೋಟಿ ಜನಗಳ ಒಳಗ ಹುಟ್ಟತಾನ ಒಬ, ಧರ್ಮ

ಕೃತಾ ತೃತಾ ದ್ವಾಪಾರ ಕಲಿಯುಗದ ಕಾಲ ಆಹಂಕಾರದಿಂದ ಮೆರದಾಡಿ ದೈತ್ಯರು ಹಾಳಾಗಿ ಹೋಗ್ಯಾರು ಬೀಳಗಿ ಬಿದರಿ ಸಿದ್ದನ ಹಾಡ ಮುಂಗಾರಿ ಕೋಲ್ಕಿಂಚ ಒಗಿದ್ದಂಗ ಸಮುದ್ರ ಒಳಗಿನ ತೆರಿಯ ಎದ್ದ ಕಲ್ಲಿಗಿ ಹೊಡೆದ್ದಂಗ

JANPAD LYIRICS |ಹಿಂಗ ನಡದೈತೋ SIDDAPPA BIDARI |KANNADA FOLK SONG LYIRICS

Hinga nadadaito hinga nadadaito idu hinga nadadaito

devalokadaga adikaladaga hinga nadadaito

mundaka hogabekennuvarannu hindaka jagguvadu.

Adhikaradaga iddava ilisi mattobba

hattuvudu sukha annoda kaṇḍe illa yava kalakka

devadigalu daityaru jagaḷa adhikarada aseku

Devadigala daityara managada

tumbaiti hottekicca hantintavannu bittillappa

adhikarada huccale devadigaḷu

daityaru samudra manthana madida

akadi ikaḍi jagyarappa adisesana

hagga madi samudra manthana madi

tegadaru amr̥tada benne devadi daityara

naḍuve tayaragyaḷa mohini bhaktimadi

atmalinga tandano ravaṇa kanaddanga

bhaktihaḷa madi ittana gaṇapana oḷḷa mandi

guḍa duṣṭa mandiru yavagiddu jagaḷa

oḷḷavu maragi koṭṭara sapa duṣṭaragudu

hala bhumiya mala hecadaga karma koti janagaḷa olaga

huṭṭatana oba, dharma kr̥ta tr̥ta dvapara kaliyugada kala

ahankaradinda meradadi daityaru

halagi hogyaru

bilagi bidari siddana haḍa mungari kolkinca

ogiddanga samudra olagina teriya edda kalligi hodeddanga

2] ಹೆಂಗಾರ ಹೇಳಲಿ | ಯಾರ ಮುಂದ ಹೇಳಲಿ ?

ಹೆಂಗಾರ ಹೇಳಲಿ | ಯಾರ ಮುಂದ ಹೇಳಲಿ ?

ಕಣಿಗಿ ಕಂಡರು ಬಾಯಿ ಮುಚ್ಚಿ ನಾ ಸುಮ್ಮಹೆಂಗ ಇರಲಿ ?

ಬೊಗಳಿದ್ದಂಗ ನಾಯಿ ಬೆನ್ನ ಹತ್ಯೆತಿ ವಿಧಿಮಾಯಿ ಹಸಿಯದಿದ್ದರೂ ಹರದ ತಿನ್ಯಾಕ ತೆರದೈತಲ್ಲೋ ಬಾಯಿ ವೈದ್ಯರು ತಗುವತಾರ ಪ್ರಾಣ ಅಳಾಂವ ದೇಶ ನುಂಗತಾನ ದೇಶ ಕಾಯುವ ರಕ್ಷಕರೀಗ ಮಾಡತಾರ ತುಡಗತನ

ಕುರುಡಾಗ್ಯಾನ ಕಣ್ಣ ಇದ್ದಾಂವ ಮೂಕಾಗ್ಯಾನ

ಬಾಯಿ ಇದ್ದಾಂವ ಕೇಳಿದರು ಕೇಳದ್ದಂಗ ಹೊಂಟಾನ

ಕಿವಿ ಇದ್ದಾಂವ ಇದನ್ನೆಲ್ಲಾ ನೋಡಿ ರೈತ ಆಗ್ಯಾನ

ಮುಗ್ಗಲಗೇಡಿ ದುಡಿಯಲಾರದ ತಿನ್ನಾಕ ನಿಂತಾನ

ಸಾಲ ಮಾಡಿ ಮಾಡಿಕಾಣವನ್ನು ಒಳ್ಯಾವರು |

ಹಗಲು ರಾತ್ರಿ ಹುಡುಕಿದರು ಎಮ್ಮಿಹಿಂಡನ್ಯಾಗ ಆಕಳಕರುವೊಂದು ಕೂಡಿದ್ದಾಂಗ

ಆಗ್ಯಾರು ಸತ್ಯುಳ್ಳ ಶರಣರು ಹುಟ್ಟಿ |

ಈ ಭೂಮಿಗಿ ಬರತಾರಗಟ್ಟಿ ಅಹಂಕಾರದಿಂದ ಮೆರೆಯುವ ಮಂದೀನ ತುಳಿಯತಾರ ಮಟ್ಟಿ

ಹೆಚ್ಚಾಗೈತೋ ಕರ್ಮ ಬಿಡಬ್ಯಾಡರಿ ನಿಮ್ಮ ಧರ್ಮ

ಸತ್ತರು ಹುಗದರು ಎಬ್ಬಿಸಿ ತಗುವತಾರ ನಿಮ್ಮ ಚರ್ಮ ಮಾತು ಮಾಣಿಕ್ಯ


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।