Congress Party Promotion Song Lyirics 2023 In Kannada|Politicis India Song Lyirics

Published by mandmoulya on

Congress Party Promotion Song Lyirics 2023 In Kannada|Politicis India Song Lyirics

ನಮಸ್ಕಾರ ಗೆಳೆಯರೇ ಈ ಜಾನಪದ ಶೈಲಿಯ ಹಾಡು ನಾನು ಭಾಷಾ ಖಾನ್ ಬಿಜಾಪುರ್ 2019 ರಲ್ಲಿ ನಮ್ಮ ಬಿಜಾಪುರದ ಶಾಸಕ್ ಮಕಬೂಲ ಬಾಗವಾನ ಇವರ ಹೊಗಳಿಕೆಯಲ್ಲಿ ಬರೆದಿದ್ದು 2014 ರಿಂದ 2019 ರವರೆಗೆ ಮಕಬೂಲ ಬಾಗವಾನ ಸಾಹೇಬರು ನಮ್ಮ ಬಿಜಾಪುರದ MLA ಆಗಿ ಜನಸೇವೆಯನ್ನು ಮಾಡಿದ್ದರು ಇವರ ಅವಧಿಯಲ್ಲಿ ಬಾಳಷ್ಟು ಬಡ ಜನರ ಜೀವನವನ್ನು ಬದಲಾಗಿದೆ ಈ ಹಾಡು ಕೆಳಗೆ ಬರೆದಿದ್ದೀನಿ ಓದಿ ನಿಮ್ಮ ಅನಿಸಿಕೆ ಗಳನ್ನೂ ತಿಳಿಸಿ
ನಿಮ್ಮ ಪ್ರೀತಿಯ ಕನ್ನಡ ಜಾನಪದ ಕಲಾವಿದ
ಭಾಷಾ ಖಾನ್

ವಿಜಾಪುರದ ಮಕಬೂಲ್ ಅಣ್ಣ ಹೆಮ್ಮೆಯ ಶಾಸಕರು
ಬಡವರ ಬಂಧು ಕ್ಷೇತ್ರದಿ ಇಂದು ಕೀರ್ತಿ ಪಡೆದವರು
dr. ಮಕಬೂಲ ಅಣ್ಣವರು

ಹೆಸರಾಂತ ಜಿಲ್ಲೆ ವಿಜಯಪುರದ ನೆಚ್ಚಿನ ಶಾಸಕರು
ಹೂವಿನಂಥ ಮನಸಿನ ಬಂಗಾರದ ಮನುಷ್ಯ ಮಕಬೂಲ್ ಅಣ್ಣವರು
ಐದು ವರುಷದಲ್ಲಿ ಜಿಲ್ಲೆಯ ಜನತೆಯ ಮನಸನು ಗೆದ್ದವರು
ಕಷ್ಟದಿ ಬಂಡ ಬಡವರ ಕೈ ನಗ ನಗತಾ ಹಿಡಿದವರು
ಹಿಂದೂ ಮುಸಲ್ಮಾನರಲ್ಲಿ ಭೇದ ಭಾವ ಅಳಸಿದವರು
ಹಿಂದೂ ಮುಸಲ್ಮಾನರಲ್ಲಿ ಭೇದ ಭಾವ ಅಳಸಿದವರು
ಎಲ್ಲರು ಒಂದೇ ತಾಯಿಯ ಮಕ್ಕಳು ಅನ್ನುವ ಗುಣದವರು
ಮಕಬೂಲ್ ಬಗ್ವಾನ್ ಅಣ್ಣವರು

ವಿಜಾಪುರದ ಮಕಬೂಲ್ ಅಣ್ಣ ಹೆಮ್ಮೆಯ ಶಾಸಕರು
ಬಡವರ ಬಂಧು ಕ್ಷೇತ್ರದಿ ಇಂದು ಕೀರ್ತಿ ಪಡೆದವರು
dr. ಮಕಬೂಲ ಅಣ್ಣವರು

ಸಿಟ್ಟಿಲ್ಲ ಕೋಪಿಲ್ಲ ಯಾವತ್ತೂ ಮುಖದಲಿ ನಗು ಅರಳತೈತಿ
ಮಕಬೂಲ ಭಾಗವಾನರಿಗೆ ಜಿಲ್ಲೆಯ ಜನತೆ ಹೊಗಳತೈತಿ
ಮಕಬೂಲ್ ಹೆಸರಿನ ದೀಪದಿಂದ ವಿಜಯಪುರ ಬೆಳಗೈತಿ
ಕಾಂಗ್ರೆಸ್ ಪಕ್ಷದ ಗಾಳಿಪಟ ಆಕಾಶದಿ ಹಾರೈತಿ
ಮಕಬೂಲ್ ಅನ್ನವರ ಗುಣವನ್ನು ಎಷ್ಟು ಹೊಗಳಿರ ಕಂಮೈತಿ
ಮಕಬೂಲ್ ಅನ್ನವರ ಗುಣವನ್ನು ಎಷ್ಟು ಹೊಗಳಿರ ಕಂಮೈತಿ
ಜನ್ ಸೇವೆಯೆ ಜನಾರ್ಧನ ಸೇವೆ ಅನ್ನುವ ಗುಣ ಐತಿ
ಮಕಬೂಲ್ ಅಣ್ಣಾವರ ಮನಸೈತಿ

ವಿಜಾಪುರದ ಮಕಬೂಲ್ ಅಣ್ಣ ಹೆಮ್ಮೆಯ ಶಾಸಕರು
ಬಡವರ ಬಂಧು ಕ್ಷೇತ್ರದಿ ಇಂದು ಕೀರ್ತಿ ಪಡೆದವರು
dr. ಮಕಬೂಲ ಅಣ್ಣವರು

ಜವಾಹರ್ ನೆಹರು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪಕ್ಷ
ಇಂದಿರಾ ರಾಜೀವ ಗಾಂಧಿ ಪ್ರಾಣ ತ್ಯಾಗ ಮಡಿದ ಪಕ್ಷ
ಕೋಟ್ಯಂತ ಬಡವರ ಕುಟುಂಬಗಳಿಗೆ ಅನ್ನ ನೀಡಿದ ಪಕ್ಷ
ಲಕ್ಷಾಂತ ರೈತರ ಸಾಲದ ಬಡ್ಡಿ ಮನ್ನಾ ಮಾಡಿದ ಪಕ್ಷ
ಐದು ವರುಷದಲ್ಲಿ ನುಡಿದಂತೆ ನಡೆದೈತಿ ನಮ್ಮ ಕಾಂಗ್ರೆಸ್ಸ ಪಕ್ಷ
ಐದು ವರುಷದಲ್ಲಿ ನುಡಿದಂತೆ ನಡೆದೈತಿ ನಮ್ಮ ಕಾಂಗ್ರೆಸ್ಸ ಪಕ್ಷ
ಹಸ್ತದ ಗುರುತು ಮಕಬೂಲ ಅಣ್ಣ ಸಿದ್ರಾಮಯ್ಯರ ಪಕ್ಷ
ಇದುವೇ ನಮ್ಮ ಕಾಂಗ್ರೆಸ್ ಪಕ್ಷ


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।