Ballyada Gelatana Janpad Song Lyirics Kannada|ಬಾಲ್ಯದ ಗೆಳತನ |ಕನ್ನಡ ಜಾನಪದ ಗೀತೆ ಲಿರಿಕ್ಸ್

Published by mandmoulya on

Ballyada Gelatana Janpad Song Lyirics Kannada|ಬಾಲ್ಯದ ಗೆಳತನ |ಕನ್ನಡ ಜಾನಪದ ಗೀತೆ ಲಿರಿಕ್ಸ್

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ ಈ ಹಾಡು ಭಾಷಾ ಖಾನ್ ಬಿಜಾಪುರ ಸಾಕಿನ ಕಾಖಂಡಕಿ ಇವರು ಬರೆದಂಥ ಒಂದು ಸುಂದರವಾದ ಲವ್ ಫೀಲಿಂಗ್ ಜಾನಪದ್ ಹಾಡು . ಭಾಷಾ ಖಾನ್ ಇವರು ಸುಮಾರು ೧೦೦ ಕಿಂತ ಹೆಚ್ಚು ಜನಪದ್ ಗೀತೆಗಳು ಕನ್ನಡದಲ್ಲಿ ಬರೆದು  ಹಾಡಿ ನಮ್ಮ ಉತ್ತರ ಕರ್ನಾಟಕದ ಜನರ ಮನದಲ್ಲಿ ತಮ್ಮ ವಿಶೇಷ ವಾದ ಸ್ಥಾನವನ್ನು ಮಾಡಿ ಕೊಂಡಿದ್ದಾರೆ . ಭಾಷಾ ಖಾನ್ ಅವರು ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಹಿಂದಿ ಮರಾಠಿ ಯಲ್ಲಿ ಕೂಡಾ ಜಾನಪದ ಸಾಹಿತ್ಯವನ್ನು ಬರೆದು ಹಾಡಿ ಕ್ಯಾಸೆಟ್ ಮುಖಾಂತರ ಎರಡು ದಶಕದಿಂದ ನಾಡಲ್ಲಿ ಮನೋರಂಜನೆ ಮಾಡುತ್ತಿದ್ದಾರೆ

ಈ ಹಾಡನ್ನು ಅವರೇ ಹಾಡಿದ್ದು ಮತ್ತು ಸಾಹಿತ್ಯ ಬರೆದಿದ್ದು ಅದನ್ನು ವಿಡಿಯೋ ಮೂಲಕ ತಮ್ಮ Youtube Channel ನಲ್ಲಿ Mand molya ALL IN 1 uplode ಮಾಡಿದ್ದಾರೆ ಲಿಂಕ್ ಕೆಳಗೆ ಇದೆ

ಬರಿದಾದ ಕೊರಳಾಗ ಕರಿಮಣಿ ದಾರ್ ಕಟಕೊಂಡಿ

ನೀ ಹೊಂಟಿ ಗೆಳತಿ ನನ್ನ ಬಿಟ್ಟ ನೀನು ದೂರ ಹೊಂಟಿ

ಈ ನನ್ನ ಬಾಳಿಗೆ ಹಚ್ಚಿದಿ ಗೆಳತಿ ಮುಳ್ಳ ಕಂಟಿ

ಪ್ರೀತಿಗೆ ಬಡದೆಲ್ಲ ದೂರ ನಿಂತ ಮಣ್ಣ ಹೆಂಟಿ

ಪಲ್ಲವಿ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ನಿಬ್ಬಣ ಗಾಡಿ ಹತ್ತಿ ಹುರಪಿಲೆ ನೀ ಹೊಂಟೇನ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ಚರಣ 1

ಆಸತ್ತ ಬ್ಯಾಸತ್ತ ತೋಡಿ ಮ್ಯಾಲ ನೀನು ಮಲಗಾಕಿ

ನಾ ಒಂದೂ ಘಳಿಗಿ ನಿನಗ ಕಾಣದಿದ್ದರ ಅಳುವಾಕಿ ।।೨।।

ಸಾವು ಬದುಕು ಇಂದಿಗೂ ನಿನ್ನ ಜೋಡಿ ಅಂದಾಕಿ

ಈಗ ಹೊಂಟಿದಿ ಗೆಳತಿ ಮಾರಿ ಮ್ಯಾಗ ಮಣ್ಣ ಹಾಕಿ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ನಿಬ್ಬಣ ಗಾಡಿ ಹತ್ತಿ ಹುರಪಿಲೆ ನೀ ಹೊಂಟೇನ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ಚರಣ 2

ಹಾವಿಗಿ ಹದ್ದು ಹೊಡೆದಂಗ ಗೆಳತೀ ಹೊಡೆದೆಲ್ಲ

ಆ ನಿನ್ನ ಮನಸರೆಂಗ ಆಗಿ ಹೋಗೈತಿ ಕಲ್ಲ ।। ೨।।

ಹಸೆ ಮಣಿ ಏರುವಾಗ ಧ್ಯಾಸ ಬರಲಿಲ್ಲೇನ

ಗಂಡನ ಸಡಗರಡಿ ಮಾಡಿದ ಪ್ರೀತಿ ಮರತೇನ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ನಿಬ್ಬಣ ಗಾಡಿ ಹತ್ತಿ ಹುರಪಿಲೆ ನೀ ಹೊಂಟೇನ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ಚರಣ 3

ಮನಸಾರೆ ಕಟ್ಟಿದ ನಮ್ಮ ಕನಸಿನ ಅರಮನಿ

ಕಟ ಗ್ಯಾನ ಹುಳದಂಗ ಕೋರ ಕೊರದ ಮುರದಿ ನೀ ।। ೨।।

ಹಾಲು ಎರೆದರು ವಿಷ ಎರದಂಗ ಎರದಿ ನೀ

ಯಾವ ತಪ್ಪಿಗೆ ಗೆಳತಿ ಹಿಂತ ಶಿಕ್ಷೆ ಕೊಟ್ಟಿ ನೀ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

ನಿಬ್ಬಣ ಗಾಡಿ ಹತ್ತಿ ಹುರಪಿಲೆ ನೀ ಹೊಂಟೇನ

ಬಾಲ್ಯದ ಗೆಳತನ ಉಳಿಯಲಿಲ್ಲ ಕಡಿತನ

MAND MOULYA ALL IN 1

BASHA KHAN OFFICIL

FOLK STARS

DREAM HOUSE

folk stars comedy


mandmoulya

My name is Basakhan, I was very fond of acting and writing songs since childhood. I have written and sung over 800 songs so far. Has directed over 200 songs, and has also played the role of a hero in all those songs. Hindi translation: मेरा नाम बाशाखान है, मुझे बचपन से ही एकटिंग करने का और गाने लिखने का बहुत शौक था. मैने अब तक 800 से ज्यादा गीत लिखे और गाये हैं। 200 से ज्यादा गीतों का निर्देशन किया है, और उन सभी गीतों में हीरो का रोल भी अदा किया है।